ಚಿಕ್ಕ ಪಡಸಲಗಿ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ.ಇದು ಕರ್ನಾಟಕ ರಾಜ್ಯದ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿದೆ. ಚಿಕ್ಕ ಪಡಸಲಗಿ ಗ್ರಾಮವು ಜಿಲ್ಲಾ ಕೇಂದ್ರ ಬಾಗಲಕೋಟದಿಂದ ಸುಮಾರು ೭೦ ಕಿ. ಮಿ. ದೂರದಲ್ಲಿದ್ದು ಬಿಜಾಪೂರ - ಜಮಖಂಡಿ ರಾಜ್ಯ ಹೆದ್ದಾರಿಯಲ್ಲಿದೆ. == ಚರಿತ್ರೆ == ಚಿಕ್ಕ ಪಡಸಲಗಿಯಲ್ಲಿ ಒಳ್ಳೆಯ ಶಿಕ್ಷಣ, ವ್ಯಾಪಾರ, ಹಣಕಾಸು, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ,ಬ್ಯಾಂಕ್ ಹಾಗೂ ಇತರೆ ಕಚೇರಿಗಳಿವೆ.ಇದು ಕೃಷ್ಣಾ ನದಿಯ ದಡದಲ್ಲಿದ್ದು ಬ್ರಿಟಿಷ್ ಕಾಲದ ಸೇತುವೆ ಮತ್ತು ಸಿದ್ದು ನ್ಯಾಮಗೌಡರ ನೇತೃತ್ವದಲ್ಲಿ ಕಟ್ಟಿಸಿದ ಬ್ಯಾರೇಜ್ ಇದೆ. == ದೇವಾಲಯಗಳು == ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ಚಂದ್ರಗಿರಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ. == ಮಸೀದಿಗಳು == ಮುಸ್ಲಿಂ ಸಮುದಾಯದ ದರ್ಗಾ ಇದೆ == ನೀರಾವರಿ == ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. == ಹಬ್ಬಗಳು == ಶ್ರೀ ಹನುಮಾನ ಓಕುಳಿ, ಶಿವರಾತಿ ಶ್ರೀ ಲಕ್ಷ್ಮೀ ಜಾತ್ರಾ ಮಹೋತ್ಸ ವ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ. == ಶಿಕ್ಷಣ == ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ', ಶಿವಶರಣ ಹರಳಯ್ಯ ಪ್ರೌಡ ಶಾಲೆ, ಶಿವಶರಣ ಹರಳಯ್ಯ ಪ್ರಾಥಮಿಕ ಶಾಲೆ ಎಸ್.ಜಿ.ಬಾಳೆಕುಂದ್ರಿ ಆಂಗ್ಲಮಾಧ್ಯಮ ಶಾಲೆ', ಕೈಗಾರಿಕಾ ತರಬೇತಿ ಕೇಂದ್ರಗಳು ಒಳ್ಳೆಯ ಶಿಕ್ಷಣ ನೀಡುತ್ತಿವೆ.